hope u looking for . .
I miss u :'(
ಕಣ್ಣoಚಲೀ ನಿನ್ನ ನೆನಪಿದೆ
ನೋವಿನ ಬಿಂಬ ನಗುತಿದೆ
ಪ್ರೀತಿಯ ಹಸಿವಿದೆ
ಕೈಯಲೀ ಕೊನೆಯ ಸ್ಪರ್ಶವಿದೆ
ಎದೆಯಲೀ ಏನೋ ಭಯವಿದೆ
ಆಳದ ಉಸಿರಿದೆ
ಹುಣ್ಣಿಮೆಯ ಚಂದ್ರನಲ್ಲಿ
ಚಂದದ ಆ ನಗುವ ಚೆಲ್ಲಿ
ಹೋದೆಯಾ . . ಮೋಡದಾ . . ಮರೆಯಲೀ . .
There's something missing in my heart . .
ನೋವಿನ ಬಿಂಬ ನಗುತಿದೆ
ಪ್ರೀತಿಯ ಹಸಿವಿದೆ
ಕೈಯಲೀ ಕೊನೆಯ ಸ್ಪರ್ಶವಿದೆ
ಎದೆಯಲೀ ಏನೋ ಭಯವಿದೆ
ಆಳದ ಉಸಿರಿದೆ
ಹುಣ್ಣಿಮೆಯ ಚಂದ್ರನಲ್ಲಿ
ಚಂದದ ಆ ನಗುವ ಚೆಲ್ಲಿ
ಹೋದೆಯಾ . . ಮೋಡದಾ . . ಮರೆಯಲೀ . .
There's something missing in my heart . .
An unfortunate Dream . .
ಕನಸಲಿ ಕಣ್ಣ ತೆರದು
ಹೆದರದೆ ಎದುರು ಬಂದು
ಇಳೆಗೆ ಮಂಡಿಯನು ಚುಂಬಿಸಿ
ನಿನ್ನ ನಯನಗಳನು ಬಂಧಿಸಿ
ಹೊಳೆದ ಪದಗಳನ್ನೆಲ್ಲಾ ಬಳಸಿ
ಮನದಾಳದ ಮಾತುಗಳನು ನಿನಗೊಪ್ಪಿಸಿ
ಕಾಯುವಾಗ ನಿನ್ನುತ್ತರಕೆ ಮೈಯ್ಯನ್ನೆಲ್ಲಾ ಕಿವಿಯಾಗಿಸಿ . . .
ಅಪ್ಪಳಿಸಿತು ಮೈಮೇಲೆ ಪದವೊಂದು
.
.
.
ಬೇವರ್ಸಿ !!
ಕಂಚಿನ ಕಂಠದಲ್ಲಿ ಬೈದಿದ್ದಳು ಅಮ್ಮ ನನ್ನ ಏಳಿಸಿ ! :(
ಸಿಗದಾಯ್ತು ಉತ್ತರ ಕೊನೆಗೂ
ಮತ್ತೆ ಮಲಗಲೇ ನಿನ್ನಂತರಾಳದ ನಿರೀಕ್ಷೆಯಲ್ಲಿ
ಕಾದಿರಿಸಿರುವೆ ಕನಸನು ನನಗೂ ನಿನಗೂ
ದಯಮಾಡಿ ಧಾಕಲಿಸು ಮನದಿ ನನ್ನನು ಎಂದಿಗೂ . .
-ಮನುಶ್ರೀ
"ಕನಸು"
ನಾನು Higher -primaryಲಿ ಇದ್ದಾಗ ಬಿದ್ದ ಕನಸು ! :D
ಆಯ್ತು ರಾತ್ರಿ ಬಂತು ನಿದ್ರಿ ZZzzz . . .
ಬಿತ್ತು ಕನಸು ಹೆದರಿತೀ ಮನಸು;
ಬಿತ್ತು ಕನಸು ಹೆದರಿತೀ ಮನಸು;
ಕಂಡೆ ಕರಡಿ, ಹೆದರಿ ದಿಕ್ಕಾಪಾಲಾಗಿ ಓಡಿ . .
ಹತ್ತಿದೆ ಮರವ . . ಕಂಡೆ ಹಾವ !!
ಇನ್ನೇನು ಎಗರಬೇಕು ನನ್ನ ಮೇಲೆ ಕರಡಿ . .
.
.
ಮಂಚದಿಂದ ಕೆಳಗೆ ಬಿದ್ದಾಗ ಮುರಿದಿತ್ತು ಮಂಡಿ;
ಹಾಗೆಯೇ ಸ್ವಲ್ಪ ನೋವಾಗಿತ್ತು "ಕು ಸೊನ್ನೆ ಡಿ"
-ಮನುಶ್ರೀ
" ಗೋಲಿ ಹೊಡಿ . . " ಯಾವನಿಗ್ಬೇಕು study . . !!
manusri's kannda song lyrics : GoliHodi :
ಹುಚಮ್ಬಟ್ಟೆ subjಗಳು vtuನಗೆ
ಹಿಡಿ ಮಣ್ಣು ನಮ್ಮ ಬಾಯೊಳಗೆ ( / ಸಾಕು ಸಾಕಗೊಯ್ತು ಮುಗ್ಸೋ ದ್ರೊಳಗೆ ) . . ೨
fail ಆದರೆ ಆಗ್ಲಿ ಬಿಡೀ. . ಫೈಲು ಆದರೆ ಆಗ್ಲಿ ಬಿಡೀ
ಇನ್ನೊಂದ್ ಸಲ ಬರ್ದ್ರಾಯ್ತು ಗೋಲಿ ಹೊಡಿ. . . .--ಪ--
ಪಕ್ಕದ್ ಮನೆ ಪಾರ್ವತಮ್ಮ. . ಮುಂದಿನ ಮನೆ ಮೀನಾಕ್ಷಮ್ಮ ..೨
ಕೇಳುತಾರೆ ಕೊಂಕು ನುಡಿ BE ಮುಗಿತಾ. .
ಹೇ. . ಅವ್ರೋದಿರೋದು ಬರಿ ಕಾಗುಣಿತಾ. . . (2)
ನಾವೆನಂತ ನಮಗೆ ಗೊತ್ತಿಲ್ಲ ಬಿಡೀ. . ..೨
ನೀವ್ಯಾಕ್ ಇರುವೆ ಬಿಡ್ಕೊತಿರ *ಕುಳಿ ಅಡಿ. . ! --1--
ಕಣ್ಣಿಗ್ ಎಣ್ಣೆ ಬಿಟ್ಟುಕೊಂಡು. . ಬಟ್ಟೆ ಎಲ್ಲ ಹರ್ಕೊಂಡು . . ..೨
ಓದಿದರೂ ನಾನು pass ಆಗಲಿಲ್ಲ. .
ಹೇ. . ಓದಿದ್ದು ಯಾತ್ರುದು ಬರಲಿಲ್ಲ. .! (2)
?n ಪೇಪರ್ bounce ಆದ್ರೆ ನಾನೇನ್ ಮಾಡ್ಲಿ. . ..೨
ನನ್ನ ಹಣೆ ಬರಹವ ನೀವೇ ನೋಡಿ. . . :( --2--
ಪಕ್ಕದ್ ಮನೆ ಹುಡುಗಿ ನೋಡು. . 85 % . . ..೨
ನೀನೂ ತಗಿಯೋಕೆ ನಿನಗೇನು ದಾಡೀ. .
ಹೇ. . ಅಂತ ಬಯ್ಯುತಾರೆ ಅಪ್ಪ ಅಮ್ಮನೂ ಕೂಡಿ. . (2)
ಸುಮ್ನೆ 1ಮಾತ್ ಹೇಳ್ತಿನ್ ಮದ್ವೆ ಮಾಡಿ. . ..೨
ಮೊಮ್ಮಕ್ಳು ಎತ್ಕೊಂಡು ಆಟ ಆಡೀ . . . !
-----<<<>>>----
"ಕಣ್ಣು ಹೊಡಿ" . .
*** "ಹೊಗೆ" ಮತ್ತು "ಗೋಲಿಹೊಡಿ" *** ಕ್ಯಾಮಿಲ್ಲದೆ ಮಾಡಿದ ಈ ಎರಡು ವೀಡಿಯೊಗಳನ್ನು ಸಿಕ್ಕಾಪಟ್ಟೆ ಪ್ರೀತಿಸಿ, ನನ್ನ ಈ ಚಟಕ್ಕೆ ಹಾಲು ತುಪ್ಪ ಹಾಕಿ ಮತ್ತಷ್ಟು ಪ್ರೇರೆಪಿಸಿದ್ದೀರಿ. ಹೀಗೆ ನನ್ನನ್ನು tempt ಮಾಡಿ ಮತ್ತೊಂದು ವೀಡಿಯೊ ಆಲ್ಬಮ್ ಮಾಡಲು ನೇರವಾಗಿ ಕಾರಣರಾಗಿದ್ದೀರಿ!. ನಿಮ್ಮನ್ನು ರಂಜಿಸಲು ಮತ್ತೆ ತಲೆಯೊಳಗೆ ಬೆರಳಾಡಿಸಿದ್ದೀನಿ(ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲದ ಭರವಸೆಯೊಂದಿಗೆ!! )
Manusri's kannada song lyrics : kannu Hodi :
ಹಾಲುಗೆನ್ನೆಯ ಗುಳಿಯಲೀ ಜಾರಿ ಬಿದ್ದ ಹುಡುಗನಾ . .
ತಳುಕು ಬಳುಕುವ ನಡುವನೂ ನೋಡಿ ಕರಗಿ ಹೋದೆನಾ . .
ಮತಿಭ್ರಮಣೆಯೂ ಆಗಿದೇ . . ಮನಸಿಂದು ಹಾಳಾಗಿದೆ
ನನಗೂ ನಿನಗೂ ಇಂದು ಏನೋ Dingchaka -Dingchaka ಆಗಿದೇ . . ||ಪ||
ಮಂತ್ರಿ ಮಾಲಿನಲ್ಲಿ ಜಾರಿ elivatorನಲ್ಲಿ,
ಎಣ್ಣೆ ಬಾಂಡ್ಲಿಯೊಳಗೆ ಬೋಂಡ ಜಾರಿದಂಗೆ ಮಳ್ಳಿ
ಕವಳಾ ಎಂದೇ ಶಿವನೆ ಇವಳಾ ತಂದೆ . . .
Faastu reply ಗೆ thanksO ತಂದೆ !
ನೀ ಎಡವಲು ನಾ ಹಿಡಿಯಲೂ . . .
touching touchingu ಆಗಿದೇ . . ||೧||
ಸುಮ್ನೆ ಯಾಕೆ ಹೀಗೆ ಟೈಮ್ wasteu ಮಾಡುತೀಯ ನಲ್ಲೆ
ನನ್ನ ಈಗಲೇನೆ ಬೇಗ ಮಾಡುವೆ ಮಾಡಿಕೊಳ್ಳೆ ??
ಪುಂಗೀ ಊದಿದ್ದು ಸಾಕು ನೀ ಡೋಂಗಿ lover
ನನ್ನ ಅಪ್ಪ ಮಾಡವ್ನೆ ನಿಂಗೆ ಗೊತ್ತಾ 4 murder . .
ನಾ ತಂಗಿಯೂ ನೀ ಅಣ್ಣನೂ ಕೊಟ್ಟು ಹೋಗಲೋ Giftನೂ || ೨ ||
Subscribe to:
Posts (Atom)