hope u looking for . .

"☀ ಬೆಳಕಿನ ಹಾಜರಿ ☀ "


ಹೋದರೆ ಹೋಗಲೀ ಚಂದಿರ
ಇರುಳಿನ ಕತ್ತಲಲ್ಲಿ ;
ಬೆಳಕನು ಬೀರೋ ಹಣತೆ
  ಇರುವಳು ನನ್ನಯ  ಎದೆಯಲೀ !!
ಕಪ್ಪು ಬಿಳುಪಲ್ಲೇ ಕಂಡ ಕನಸನ್ನು ,
ಕಟ್ಟಿಕೊಟ್ಟಳು  ಬಣ್ಣ ಬಣ್ಣ ದಲಿ ;
ದಿನ ದಿನವು ಹೋಳಿ,  ಅವಳ ಮಡಿಲೇ ಜೋಲಿ ;
ಮನದ ಕತ್ತಲಲ್ಲಿ ಅವಳ ಬೆಳಕಿನ ಹಾಜರಿ  . . 
(✿◠‿◠)


 
-ಮನುಶ್ರೀ

***ಹರಿಹರೇಶ್ವರ***


ಮಗುವಿನ ನಗುವನು ಉಳ್ಳವನೀತ
ಮನದ ದುಗುಡ ಮರೆಸುವಾತ
ಭಕ್ತಿ ಇಂದ ಮನದಿ ನೆನೆದರೆ 
  ಹರಿಹರೇಶ್ವರ ಹರಸುವಾತ ||

ಜಗವೇ ಒಂದು ನಾಟಕ ರಂಗ

ಸೂತ್ರಧಾರ ಪಾಂಡುರಂಗ
ಕತ್ತಲಿನಿಂದ ಬೆಳಕಿನೆಡೆಗೆ
 ನಡೆಸುವವನೆ ಆತ್ಮಲಿಂಗ  ||

ಈತ ರಂಗನಾದ ಹರಿಯು

ಆತ ಲಿಂಗನಾದ ಹರನು

**ಈತ ಹರಿಯು - ಆತ ಹರನು**
*** 

An unfortunate Dream . .



ಕನಸಲಿ ಕಣ್ಣ ತೆರದು
ಹೆದರದೆ ಎದುರು ಬಂದು
ಇಳೆಗೆ ಮಂಡಿಯನು ಚುಂಬಿಸಿ
ನಿನ್ನ ನಯನಗಳನು ಬಂಧಿಸಿ
ಹೊಳೆದ ಪದಗಳನ್ನೆಲ್ಲಾ ಬಳಸಿ
ಮನದಾಳದ ಮಾತುಗಳನು ನಿನಗೊಪ್ಪಿಸಿ
ಕಾಯುವಾಗ ನಿನ್ನುತ್ತರಕೆ ಮೈಯ್ಯನ್ನೆಲ್ಲಾ ಕಿವಿಯಾಗಿಸಿ . . . 
ಅಪ್ಪಳಿಸಿತು ಮೈಮೇಲೆ ಪದವೊಂದು
.
.
.
ಬೇವರ್ಸಿ   !!
ಕಂಚಿನ ಕಂಠದಲ್ಲಿ ಬೈದಿದ್ದಳು ಅಮ್ಮ ನನ್ನ ಏಳಿಸಿ ! :(

ಸಿಗದಾಯ್ತು ಉತ್ತರ ಕೊನೆಗೂ
ಮತ್ತೆ ಮಲಗಲೇ ನಿನ್ನಂತರಾಳದ ನಿರೀಕ್ಷೆಯಲ್ಲಿ
ಕಾದಿರಿಸಿರುವೆ ಕನಸನು ನನಗೂ ನಿನಗೂ
ದಯಮಾಡಿ ಧಾಕಲಿಸು ಮನದಿ ನನ್ನನು ಎಂದಿಗೂ . . 
-ಮನುಶ್ರೀ

"ಕನಸು"

ನಾನು Higher -primaryಲಿ ಇದ್ದಾಗ  ಬಿದ್ದ ಕನಸು ! :D 

ಆಯ್ತು ರಾತ್ರಿ ಬಂತು ನಿದ್ರಿ ZZzzz  . . .
ಬಿತ್ತು ಕನಸು ಹೆದರಿತೀ ಮನಸು;

ಕಂಡೆ ಕರಡಿ, ಹೆದರಿ ದಿಕ್ಕಾಪಾಲಾಗಿ ಓಡಿ . .
ಹತ್ತಿದೆ ಮರವ  . . ಕಂಡೆ ಹಾವ !!
 

ಇನ್ನೇನು ಎಗರಬೇಕು ನನ್ನ ಮೇಲೆ ಕರಡಿ  . .
.

.
ಮಂಚದಿಂದ ಕೆಳಗೆ  ಬಿದ್ದಾಗ ಮುರಿದಿತ್ತು ಮಂಡಿ;
ಹಾಗೆಯೇ ಸ್ವಲ್ಪ ನೋವಾಗಿತ್ತು "ಕು ಸೊನ್ನೆ ಡಿ" 

-ಮನುಶ್ರೀ

" ಗೋಲಿ ಹೊಡಿ . . " ಯಾವನಿಗ್ಬೇಕು study . . !!



" ಹೊಗೆ " , ಮೊದಲ ಪ್ರಯತ್ನದ ನಂತರ ಮತ್ತೊಂದು video clip ನ ಜೊತೆ . . " ಗೋಲಿ ಹೊಡಿ . . " ಯಾವನಿಗ್ಬೇಕು study . . !!

manusri's kannda song lyrics : GoliHodi  :


ಹುಚಮ್ಬಟ್ಟೆ subjಗಳು vtuನಗೆ
ಹಿಡಿ ಮಣ್ಣು ನಮ್ಮ ಬಾಯೊಳಗೆ ( / ಸಾಕು ಸಾಕಗೊಯ್ತು ಮುಗ್ಸೋ ದ್ರೊಳಗೆ ) . . ೨
fail ಆದರೆ ಆಗ್ಲಿ ಬಿಡೀ. . ಫೈಲು ಆದರೆ ಆಗ್ಲಿ ಬಿಡೀ
ಇನ್ನೊಂದ್ ಸಲ ಬರ್ದ್ರಾಯ್ತು ಗೋಲಿ ಹೊಡಿ. . . .--ಪ--

ಪಕ್ಕದ್ ಮನೆ ಪಾರ್ವತಮ್ಮ. . ಮುಂದಿನ ಮನೆ ಮೀನಾಕ್ಷಮ್ಮ ..೨
ಕೇಳುತಾರೆ ಕೊಂಕು ನುಡಿ BE ಮುಗಿತಾ. .
ಹೇ. . ಅವ್ರೋದಿರೋದು ಬರಿ ಕಾಗುಣಿತಾ. . . (2)
ನಾವೆನಂತ ನಮಗೆ ಗೊತ್ತಿಲ್ಲ ಬಿಡೀ. . ..೨
ನೀವ್ಯಾಕ್ ಇರುವೆ ಬಿಡ್ಕೊತಿರ *ಕುಳಿ ಅಡಿ. . ! --1--

ಕಣ್ಣಿಗ್ ಎಣ್ಣೆ ಬಿಟ್ಟುಕೊಂಡು. . ಬಟ್ಟೆ ಎಲ್ಲ ಹರ್ಕೊಂಡು . . ..೨
ಓದಿದರೂ ನಾನು pass ಆಗಲಿಲ್ಲ. .
ಹೇ. . ಓದಿದ್ದು ಯಾತ್ರುದು ಬರಲಿಲ್ಲ. .! (2)
?n ಪೇಪರ್ bounce ಆದ್ರೆ ನಾನೇನ್ ಮಾಡ್ಲಿ. . ..೨
ನನ್ನ ಹಣೆ ಬರಹವ ನೀವೇ ನೋಡಿ. . . :( --2--

ಪಕ್ಕದ್ ಮನೆ ಹುಡುಗಿ ನೋಡು. . 85 % . . ..೨
ನೀನೂ ತಗಿಯೋಕೆ ನಿನಗೇನು ದಾಡೀ. .
ಹೇ. . ಅಂತ ಬಯ್ಯುತಾರೆ ಅಪ್ಪ ಅಮ್ಮನೂ ಕೂಡಿ. . (2)
ಸುಮ್ನೆ 1ಮಾತ್ ಹೇಳ್ತಿನ್ ಮದ್ವೆ ಮಾಡಿ. . ..೨
ಮೊಮ್ಮಕ್ಳು ಎತ್ಕೊಂಡು ಆಟ ಆಡೀ . . . !

    -----<<<>>>----
 

"ಕಣ್ಣು ಹೊಡಿ" . .




*** "ಹೊಗೆ" ಮತ್ತು "ಗೋಲಿಹೊಡಿ" *** ಕ್ಯಾಮಿಲ್ಲದೆ ಮಾಡಿದ ಈ ಎರಡು ವೀಡಿಯೊಗಳನ್ನು ಸಿಕ್ಕಾಪಟ್ಟೆ ಪ್ರೀತಿಸಿ, ನನ್ನ ಈ ಚಟಕ್ಕೆ ಹಾಲು ತುಪ್ಪ ಹಾಕಿ ಮತ್ತಷ್ಟು ಪ್ರೇರೆಪಿಸಿದ್ದೀರಿ. ಹೀಗೆ ನನ್ನನ್ನು tempt ಮಾಡಿ ಮತ್ತೊಂದು ವೀಡಿಯೊ ಆಲ್ಬಮ್ ಮಾಡಲು ನೇರವಾಗಿ ಕಾರಣರಾಗಿದ್ದೀರಿ!. ನಿಮ್ಮನ್ನು ರಂಜಿಸಲು ಮತ್ತೆ ತಲೆಯೊಳಗೆ ಬೆರಳಾಡಿಸಿದ್ದೀನಿ(ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲದ ಭರವಸೆಯೊಂದಿಗೆ!! )

Manusri's kannada song lyrics : kannu Hodi :


ಹಾಲುಗೆನ್ನೆಯ ಗುಳಿಯಲೀ ಜಾರಿ ಬಿದ್ದ ಹುಡುಗನಾ  . .
ತಳುಕು ಬಳುಕುವ ನಡುವನೂ ನೋಡಿ ಕರಗಿ ಹೋದೆನಾ  . .
ಮತಿಭ್ರಮಣೆಯೂ ಆಗಿದೇ . . ಮನಸಿಂದು ಹಾಳಾಗಿದೆ
ನನಗೂ ನಿನಗೂ ಇಂದು ಏನೋ Dingchaka -Dingchaka   ಆಗಿದೇ . . ||ಪ||   

ಮಂತ್ರಿ ಮಾಲಿನಲ್ಲಿ ಜಾರಿ elivatorನಲ್ಲಿ,
ಎಣ್ಣೆ ಬಾಂಡ್ಲಿಯೊಳಗೆ ಬೋಂಡ ಜಾರಿದಂಗೆ ಮಳ್ಳಿ
ಕವಳಾ ಎಂದೇ ಶಿವನೆ ಇವಳಾ ತಂದೆ . . .
Faastu reply ಗೆ thanksO ತಂದೆ !  
ನೀ ಎಡವಲು ನಾ ಹಿಡಿಯಲೂ . . .
touching   touchingu  ಆಗಿದೇ . . ||೧||

ಸುಮ್ನೆ ಯಾಕೆ ಹೀಗೆ ಟೈಮ್ wasteu ಮಾಡುತೀಯ ನಲ್ಲೆ
ನನ್ನ ಈಗಲೇನೆ ಬೇಗ ಮಾಡುವೆ ಮಾಡಿಕೊಳ್ಳೆ ??
ಪುಂಗೀ ಊದಿದ್ದು ಸಾಕು ನೀ ಡೋಂಗಿ lover
ನನ್ನ ಅಪ್ಪ ಮಾಡವ್ನೆ ನಿಂಗೆ ಗೊತ್ತಾ 4 murder  . .
ನಾ ತಂಗಿಯೂ ನೀ ಅಣ್ಣನೂ ಕೊಟ್ಟು ಹೋಗಲೋ Giftನೂ || ೨ ||


Kannu Hodi - trailer MP4


Exclusive stills from kannu Hodi

------------------------------------
cinematograophy: Arvind kumar 
casting: manusri & prajwala        
music-lyrics-songster:manusri     
stil photographer : Ashok kumar 
-------------------------------------------                 












" ಕಣ್ಣು ಹೊಡಿ " team . .

Exclusive stills from GoliHodi :

                                                                                    



Pencil Sketches :

 
Bharata Naari
***
Sri Arabinda Ghosh

Early to bed early to rise
makes u healthy,wealthy n wise

Big-B
Sardarvallabhai Patel



Glass,wood n fabric paintings :

                                                                     Baby Santa . .
                                                                       
                                                                            ***
Titanic Trees

***
 
Titanic Trees

***

swan
***
Vass

***
Ganu maama on bamboo
***
  
 
work on T-shirt

                                                                           * ಮತ್ಸ್ಯ ಕನ್ಯೆ *