hope u looking for . .

Showing posts with label LAHARI. Show all posts
Showing posts with label LAHARI. Show all posts

ಬೆತ್ತಲು ಮನಸು . .

ನಿನ್ನ ಕಣ್ಣಲ್ಲಿ ಅದೆಷ್ಟು ಖುಷಿ . . ,
ಎನ್ನ ಮನವ ಬೆತ್ತಲಾಗಿಸಿ !

ಆಳದಿ ಅರಿಯುವ ಹಂಬಲದಿ
ತಿಳಿಯಲು ನನ್ನ ವಿಚಾರವಿಧಿ
ಕಳಚಿದೆ ಮನದ ಅರಿವೆಯನ್ನು ದಿನವೂ . ,
ಬೆತ್ತಲಾಗಿದೆ ಎನ್ನ ಮನವು
ಕಾರಣ ಅದಕೆ ನಿನ್ನ ಒಲವು 
***

"ಕತ್ತಲ ಕೋಣೆ"

ಮನದ ಕತ್ತಲ ಕೋಣೆಯಲಿ
ಟಾರ್ಚು ಸಿಗದೆ ಕಡ್ಡಿಗೀರಿದರೆ . .
ಪ್ರೀತಿಯ ಬೆಳಕಿನ ಸ್ಪರ್ಶದ ಹಂಬಲದಲಿ,
ರೆಪ್ಪೆ ಮುಚ್ಚದೆ ಕಾದು ಕುಳಿತ ಕಣ್ಗಳಲಿ
ವಿಷಾದದ ನಗು !
ಇದ್ದ ಕೊನೆಯ ಕಡ್ಡಿಯೂ ಕೈ ಸುಟ್ಟಿತು,
ಬೆಳಕಿನ ಹಾದಿ ಕಾಣದಾಯಿತು,
ರೆಪ್ಪೆ ಮುಚ್ಚದಿದ್ದರೂ 'ಕೋಣೆ' ಕಗ್ಗತ್ತಲಾಯಿತು.
ufffffff !! One mo match box please . .


Sleepy . . ZzzZ

                                             ♥‿♥
ಕಣ್ಣ ರೆಪ್ಪೆಗಳು, ಮಾತೇ ಕೇಳುವಂತಿಲ್ಲ,
ಕೈ ಹಿಡಿದು ಕನಸಿನ ಅಂಗಳಕೆ ಕರೆದೊಯ್ಯುತಿವೆ . . !!

I miss u :'(

ಕಣ್ಣoಚಲೀ ನಿನ್ನ ನೆನಪಿದೆ
ನೋವಿನ ಬಿಂಬ ನಗುತಿದೆ
ಪ್ರೀತಿಯ ಹಸಿವಿದೆ

ಕೈಯಲೀ ಕೊನೆಯ ಸ್ಪರ್ಶವಿದೆ
ಎದೆಯಲೀ ಏನೋ ಭಯವಿದೆ
ಆಳದ ಉಸಿರಿದೆ

ಹುಣ್ಣಿಮೆಯ ಚಂದ್ರನಲ್ಲಿ
ಚಂದದ ಆ ನಗುವ ಚೆಲ್ಲಿ
ಹೋದೆಯಾ  . . ಮೋಡದಾ . . ಮರೆಯಲೀ . .
There
's something missing in my heart . . 

"☀ ಬೆಳಕಿನ ಹಾಜರಿ ☀ "


ಹೋದರೆ ಹೋಗಲೀ ಚಂದಿರ
ಇರುಳಿನ ಕತ್ತಲಲ್ಲಿ ;
ಬೆಳಕನು ಬೀರೋ ☀ಹಣತೆ☀
  ಇರುವಳು ನನ್ನಯ  ಎದೆಯಲೀ♥ !!
ಕಪ್ಪು ಬಿಳುಪಲ್ಲೇ ಕಂಡ ಕನಸನ್ನು ,
ಕಟ್ಟಿಕೊಟ್ಟಳು  ಬಣ್ಣ ಬಣ್ಣ ದಲಿ ;
ದಿನ ದಿನವು ಹೋಳಿ,  ಅವಳ ಮಡಿಲೇ ಜೋಲಿ ;
ಮನದ ಕತ್ತಲಲ್ಲಿ ಅವಳ ಬೆಳಕಿನ ಹಾಜರಿ  . . 
(✿◠‿◠)


 
-ಮನುಶ್ರೀ

***ಹರಿಹರೇಶ್ವರ***


ಮಗುವಿನ ನಗುವನು ಉಳ್ಳವನೀತ
ಮನದ ದುಗುಡ ಮರೆಸುವಾತ
ಭಕ್ತಿ ಇಂದ ಮನದಿ ನೆನೆದರೆ 
  ಹರಿಹರೇಶ್ವರ ಹರಸುವಾತ ||

ಜಗವೇ ಒಂದು ನಾಟಕ ರಂಗ

ಸೂತ್ರಧಾರ ಪಾಂಡುರಂಗ
ಕತ್ತಲಿನಿಂದ ಬೆಳಕಿನೆಡೆಗೆ
 ನಡೆಸುವವನೆ ಆತ್ಮಲಿಂಗ  ||

ಈತ ರಂಗನಾದ ಹರಿಯು

ಆತ ಲಿಂಗನಾದ ಹರನು

**ಈತ ಹರಿಯು - ಆತ ಹರನು**
*** 

An unfortunate Dream . .



ಕನಸಲಿ ಕಣ್ಣ ತೆರದು
ಹೆದರದೆ ಎದುರು ಬಂದು
ಇಳೆಗೆ ಮಂಡಿಯನು ಚುಂಬಿಸಿ
ನಿನ್ನ ನಯನಗಳನು ಬಂಧಿಸಿ
ಹೊಳೆದ ಪದಗಳನ್ನೆಲ್ಲಾ ಬಳಸಿ
ಮನದಾಳದ ಮಾತುಗಳನು ನಿನಗೊಪ್ಪಿಸಿ
ಕಾಯುವಾಗ ನಿನ್ನುತ್ತರಕೆ ಮೈಯ್ಯನ್ನೆಲ್ಲಾ ಕಿವಿಯಾಗಿಸಿ . . . 
ಅಪ್ಪಳಿಸಿತು ಮೈಮೇಲೆ ಪದವೊಂದು
.
.
.
ಬೇವರ್ಸಿ   !!
ಕಂಚಿನ ಕಂಠದಲ್ಲಿ ಬೈದಿದ್ದಳು ಅಮ್ಮ ನನ್ನ ಏಳಿಸಿ ! :(

ಸಿಗದಾಯ್ತು ಉತ್ತರ ಕೊನೆಗೂ
ಮತ್ತೆ ಮಲಗಲೇ ನಿನ್ನಂತರಾಳದ ನಿರೀಕ್ಷೆಯಲ್ಲಿ
ಕಾದಿರಿಸಿರುವೆ ಕನಸನು ನನಗೂ ನಿನಗೂ
ದಯಮಾಡಿ ಧಾಕಲಿಸು ಮನದಿ ನನ್ನನು ಎಂದಿಗೂ . . 
-ಮನುಶ್ರೀ

"ಕನಸು"

ನಾನು Higher -primaryಲಿ ಇದ್ದಾಗ  ಬಿದ್ದ ಕನಸು ! :D 

ಆಯ್ತು ರಾತ್ರಿ ಬಂತು ನಿದ್ರಿ ZZzzz  . . .
ಬಿತ್ತು ಕನಸು ಹೆದರಿತೀ ಮನಸು;

ಕಂಡೆ ಕರಡಿ, ಹೆದರಿ ದಿಕ್ಕಾಪಾಲಾಗಿ ಓಡಿ . .
ಹತ್ತಿದೆ ಮರವ  . . ಕಂಡೆ ಹಾವ !!
 

ಇನ್ನೇನು ಎಗರಬೇಕು ನನ್ನ ಮೇಲೆ ಕರಡಿ  . .
.

.
ಮಂಚದಿಂದ ಕೆಳಗೆ  ಬಿದ್ದಾಗ ಮುರಿದಿತ್ತು ಮಂಡಿ;
ಹಾಗೆಯೇ ಸ್ವಲ್ಪ ನೋವಾಗಿತ್ತು "ಕು ಸೊನ್ನೆ ಡಿ" 

-ಮನುಶ್ರೀ

A Life of a "TEAR" !

"ಖುಷಿಗೋ ದುಃಖಕ್ಕೋ ಹುಟ್ಟಿ . .

ಕಣ್ಣಂಚಿನ ರೆಪ್ಪೆಯಲ್ಲಿ ಉಯ್ಯಾಲೆ ಜೀಕಿ,

ಕಣ್ಣ ಅಡಿಯಲ್ಲಿ ತಂಗಿ . ,



ಕೆನ್ನೆಯ ಜಾರೊಬಂಡಿಯಲಿ ಜಾರಿ!



ಗಲ್ಲದ ತುದಿ ತಲುಪಿದ "ಕಣ್ಣೀರಿಗಾಗಲೇ"



ವೃದ್ಧಾಪ್ಯದ ಕಡೆಯ ಕ್ಷಣಗಳು !! "



-ಮನುಶ್ರೀ
----------<><><>------------
 
 
ಆ ದನಿಯ ಅಲೆಗಳ ಸ್ನೇಹ
ತಲುಪಲು ನನ್ನ ಹೃದಯದ ದಡಕೆ,
ಮನ ತಿರುಗಿತು ಅವಳೆಡೆಗೆ . . ,
ಎನಗೆಯೂ ಕೊಡದೆ ಸುಳಿವು . . !
                                         ಆ ಕಣ್ಣುಗಳ ಮಿಲನಾಟ,
                                         ಹೂ ನಗೆಯ ಸೆಳೆತ . ,
                                         ತಪ್ಪಿಸಿದೆ ಮನದ ಮೇಲಿನ ಹಿಡಿತ  . . ! 
ಆಂ . .?? ಹೆಸರೇನೆಂದಿರಾ  . . ?? ಅವಳೇ . . "_ _ ತ".
.
.
.
Ans:ಸಂಗೀತ(music)

-ಮನುಶ್ರೀ

ಶೂನ್ಯ . .

 
 
ಎನಿತು ಎನಿತು ಈ ಮೌನ,
ನನಗೆ ನೀನೆ ಪ್ರಾಣ
ಎಂದೂ ನಿನ್ನದೇ ದ್ಯಾನ
ಕೇಳೆ ಮನದ ಆಕ್ರಂದನಾ.
                                  ಬಾಡಿದಾ ಹೂ 
                                  ಬರೀ ನೋವು . .
                                  ನೀನಿಲ್ಲದಾ ಜೀವನಾ 
                                  ಈ ಬಾಳೇ . . ಶೂನ್ಯ. 
-ಮನುಶ್ರೀ 

mobile ಪ್ರೇಮ ಪುರಾಣ :



ಬೆರಳಂಚಿನ ಭಾವಗೀತೆ ,
ಪ್ರೆಮಾಂಕುರಕ್ಕೆ ಕಾರಣವಾಯ್ತೆ . . !?
                                              ಕತ್ತಲಲ್ಲಿ ಕಳೆದು ಹೋದ ಮನಸಿಗೆ
                                              ಸುಳಿ ಮಿಂಚಿನ ಅಂಕುರವಾಯ್ತೆ . . !?
ನೋವಿನಲ್ಲೇ ಗೆಳೆತನವಾಯ್ತು 
ಜೀವನದಲ್ಲಿ ನೋವು ಮರೆತೇ ಹೋಯ್ತು !!
                                                ಎದೆಯಾಳದ inbox ನಲ್ಲಿ  ಸಂದೇಶಗಳು . ,
                                                Delete  ಆಗದೆ ..  ಉಳಿದ್ಹೋಯ್ತು!!
ಹೃದಯದಲ್ಲಿ ಹಚ್ಚಿದ ದೀಪದಿಂದ . ,
ದೂರದೂರದವರೆಗೂ ಬೆಳಕಾಯ್ತು :)